The man who had predicted that the world will be destroyed or will end on September 23 has withdrawn his statement. He has warned, in a statement to Washington Post that the destruction will begin from September 23. Many have not taken his statement seriously at all. But now a Professor by name Chandrashekhar has predicted that 2020 will be the end of the world. Will it become true?
ಪ್ರಳಯದ ದಿನಾಂಕ ಮುಂದೂಡಲಾಗಿದೆ! ಬಹುಶಃ ಈ ಸುದ್ದಿ ಕೇಳಿ ನಿಟ್ಟುಸಿರುಬಿಟ್ಟವರಿಗಿಂತ, ಇಂಥ ಸುದ್ದಿಯನ್ನು ಅದೆಷ್ಟು ಬಾರಿ ಕೇಳಿದ್ದೇವೋ ಎಂದು ಮೂಗುಮುರಿದವರೇ ಹೆಚ್ಚು! ಪ್ರತಿವರ್ಷ ಕನಿಷ್ಠವೆಂದರೆ ಒಂದು ದಿನ 'ಪ್ರಳಯ'ದ ಗುಲ್ಲೇಳುತ್ತದೆ. ಕೊನೆಗೆ ಏನೂ ಆಗದೆ ಆ ಸುದ್ದಿ ಮರೆತುಹೋಗುತ್ತದೆ. ಸೆಪ್ಟೆಂಬರ್ 23 ಕಳೆಯಿತು. ಡೇವಿಡ್ ಮೀಡೆ ಎಂಬ ಸಂಖ್ಯಾಶಾಸ್ತ್ರಜ್ಞನ ಲೆಕ್ಕಾಚಾರ ಹೇಳಹೆಸರಿಲ್ಲದಂತಾಯ್ತ. ಆದರೆ ಪ್ರಳಯದ ವದಂತಿಗೆ ಇಷ್ಟಕ್ಕೇ ಪೂರ್ಣವಿರಾಮ ಬೀಳುತ್ತದೆಯೇ ಎಂದರೆ ಖಂಡಿತ ಇಲ್ಲ. ಈಗಾಗಲೇ ಹಲವು ಸಂಖ್ಯಾಶಾಸ್ತ್ರಜ್ಞರು, ಧಾರ್ಮಿಕ ಮುಖಂಡರು ಭವಿಷ್ಯದಲ್ಲಿ ಯಾವ್ಯಾವ ದಿನ ಪ್ರಳಯವಾಗಬಹುದು ಎಂಬುದನ್ನು ಬರೆದಿಟ್ಟಿದ್ದಾರೆ!ಹೌದು, ಇವನ್ನೆಲ್ಲ ಯಾವ ಆಧಾರದ ಮೇಲೆ ಬರೆದಿದ್ದು ಎಂಬುದು ಗೊತ್ತಿಲ್ಲ. ಆದರೆ ಭವಿಷ್ಯದಲ್ಲಿ ಜಗತ್ತು ನಾಶವಾಗುವ ದಿನಗಳು ಯಾವ್ಯಾವವು ಎಂಬುದನ್ನು ಬೇರೆ ಬೇರೆ ಸಂಖ್ಯಾಶಾಸ್ತ್ರಜ್ಞರು, ಧಾರ್ಮಿಕ ಮುಖಂಡರು ಪತ್ತೆಹಚ್ಚಿದ್ದಾರೆ. ಇನ್ನು ಇದೀಗ ಕೆ ಎಸ್ ಎಫ್ ಎಫ್ ಎ ಐನ ಉಪಾಧ್ಯಕ್ಷ ಚಂದ್ರಶೇಖರ್ ಒಂದು ಭವಿಷ್ಯ ನುಡಿದಿದ್ದು 2020 ಕ್ಕೆ ಮಹಾಪ್ರಳಯ ಸಂಭವಿಸುತ್ತೆ ಎಂಬ ಭವಿಷ್ಯವನ್ನ ನುಡಿದಿದ್ದಾರೆ.